FEEDBACK

ಬಂಧುಗಳೆ,

ಆರ್ ಎಲ್ ಜಾಲಪ್ಪ ಅಕಾಡೆಮಿಯು ಶ್ರೀ ಜೆ ಪಿ ನಾರಾಯಣಸ್ವಾಮಿ ಪ್ರತಿಷ್ಠಾನ ಮತ್ತು ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಸಹಯೋಗದಲ್ಲಿ ಏಪ್ರಿಲ್ 27 ಮತ್ತು 28 ರಂದು ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಮ್ಮ ಸಮುದಾಯದ ಅಭ್ಯರ್ಥಿಗಳಿಗೆ ಮಾದರಿ ಸಂದರ್ಶನ ನಡೆಸಿತು. ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ವ್ಯಕ್ತಿ ಸಾಮರ್ಥ್ಯ ಪರೀಕ್ಷೆಯ ಸಂದರ್ಶನದಂತೆಯೇ ಈ ಮಾದರಿ ಸಂದರ್ಶನಗಳನ್ನು (Mock Interview) ಎರಡು ದಿನಗಳ ಕಾಲ ನಡೆಸಲಾಯಿತು.

ಐಎಎಸ್, ಐಎಫ್ ಎಸ್ ಹುದ್ದೆಗಳಲ್ಲಿ ಇರುವವರು, ಸರ್ಕಾರಿದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದವರು, ಶಿಕ್ಷಣ ತಜ್ಞರು, ಹಿರಿಯ ಉಪನ್ಯಾಸಕರು ಸಂದರ್ಶಕರಾಗಿ ಭಾಗವಹಿಸಿ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ನಮ್ಮ ಸಮಾಜದ ಸುಮಾರು ಇಪ್ಪತ್ತು ಅಭ್ಯರ್ಥಿಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಈ ಮಾದರಿ ಸಂದರ್ಶನದ ಪ್ರಯೋಜನ ಪಡೆದರು.

ಈ ಸಂದರ್ಶನದಿಂದ ಕೆಪಿಎಸ್ ಸಿ ಇಂಟರ್ ವ್ಯೂ ಎದುರಿಸಲು ನಮಗೆ ಧೈರ್ಯ ಬಂದಿದೆ. ನಮ್ಮ ಲೋಪಗಳ ಅರಿವಾಗಿದೆ. ನಮ್ಮ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಲು ನೆರವಾಗಿದೆ ಎಂದು ಅಭ್ಯರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎರಡೂ ದಿನಗಳ ಊಟ ಉಪಚಾರದ ಹೊಣೆಯನ್ನು ವಹಿಸಿಕೊಂಡ ಶ್ರೀ ಜೆಪಿ ನಾರಾಯಣಸ್ವಾಮಿ ಪ್ರತಿಷ್ಠಾನದ ಔದಾರ್ಯಕ್ಕೆ ಜಾಲಪ್ಪ ಅಕಾಡೆಮಿಯ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ. Mock interview ಸಂದರ್ಭದ ಕೆಲವು ಚಿತ್ರಗಳು ಇಲ್ಲಿವೆ.

ಅಕಾಡೆಮಿಯಲ್ಲಿ ತರಬೇತಿ ಪಡೆದು ಸರ್ಕಾರಿ ಉದ್ಯೋಗ ನಿರ್ವಹಿಸುತ್ತಿರುವ ಕೆಲವರ ಅನಿಸಿಕೆಗಳು

2016 ನೇ ಸಾಲಿನಲ್ಲಿ ರಾಮನಗರ ಜಿಲ್ಲೆ, ಸೋಲೂರಿನ ಆರ್.ಎಲ್.ಜಾಲಪ್ಪ ಅಕಾಡೆಮಿಯಲ್ಲಿ ಕೆಲವು ಸಮಯ ಕಳೆದಿರುತ್ತೇನೆ. ಅಲ್ಲಿ ಓದಲು ಬೇಕಾದ ಎಲ್ಲಾ ರೀತಿಯ ವಾತಾವರಣ ಇರುತ್ತದೆ. ಆಟದ ಮೈದಾನ ಇದೆ, ಸ್ಟಡಿ ಹಾಲ್ ಸಹ ಇದ್ದು ಸರ್ಕಾರಿ ಸೇವೆ ಬಯಸುವ ಎಲ್ಲಾ ಬಡವಿದ್ಯಾರ್ಥಿಗಳಿಗೆ, ತುಂಬಾ ಸಹಕಾರಿ ಆಗುವ ಎಲ್ಲಾ ಸೌಕರ್ಯಗಳು ದೊರಕುತ್ತವೆ. ನಾನು ಅವುಗಳನ್ನು ಪಡೆದುಕೊಂಡು ಈ ಎತ್ತರಕ್ಕೆ ಬೆಳೆದಿರುತ್ತೇನೆ. ತಾವುಗಳು ಸೌಕರ್ಯ ಬಳಸಿಕೊಂಡು ಜೀವನದಲ್ಲಿ ಮುಂದೆ ಬನ್ನಿ ಎಂದು ಹಾರೈಸುತ್ತೇನೆ.

ಗಿರೀಶ್ ಕೆ.ಎನ್. - ಸೊರಬ (ಕೆ.ಎ.ಎಸ್. ಅಧಿಕಾರಿ- ೨೦೧೭ ನೇ ಬ್ಯಾಚ್)
ದಾವಣಗೆರೆ ಜಿಲ್ಲಾ ಉದ್ಯೋಗಾಧಿಕಾರಿ

೨೦೧೯-೨೦ ರಲ್ಲಿ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಆಗಿ ಆಯ್ಕೆಯಾಗಿರುತ್ತೇನೆ. ಬೆಂಗಳೂರು ಸೆಂಟ್ರಲ್ ಅಲ್ಲಿ ಪ್ರೊಬೆಷನರಿ ಪಿ.ಎಸ್.ಐ. ಆಗಿ ಕರ್ತವ್ಯ \ನಿರ್ವಹಿಸುತ್ತಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ಧರಾಗಿರುವವರಿಗೆ ಉತ್ತಮ ತರಬೇತಿ ಮುಖ್ಯವಾಗಿದ್ದು, ತರಬೇತಿ ಗುರಿತಲುಪಲು ಒಂದು ಮಾರ್ಗವಾಗಿದೆ. ಜೊತೆಗೆ ಪರಿಶ್ರಮ ಮತ್ತು ನಿರಂತರ ಅಭ್ಯಾಸದಿಂದ ಬಹಳ ವೇಗವಾಗಿ ನಮ್ಮ ಗುರಿ ತಲುಪಬಹುದು. ನಾನು ಮತ್ತು ನನ್ನ ಸಹೋದರಿ ಇಬ್ಬರೂ ಸಹ ಆರ್.ಎಲ್.ಜಾಲಪ್ಪ ಅಕಾಡೆಮಿಯಲ್ಲಿ ೪ ತಿಂಗಳ ತರಬೇತಿ ಪಡೆದು ಪಿ.ಎಸ್.ಐ. ಆಗಿ ನೇಮಕವಾಗಿದ್ದೇವೆ. ಅಕಾಡೆಮಿಯಲ್ಲಿ ಊಟ, ವಸತಿ ತುಂಬಾ ಚೆನ್ನಾಗಿದೆ, ಹಾಗೂ ಗ್ರಂಥಾಲಯ ವ್ಯವಸ್ಥೆ ಚೆನ್ನಾಗಿದೆ. ವಿಶೇಷವಾಗಿ ಮಹಿಳೆಯರಿಗೆ ಸುರಕ್ಷತೆ ಇದೆ. ಹಾಗೂ ಒಳ್ಳೆ ಒಳ್ಳೆಯ ಉಪನ್ಯಾಸಕರಿಂದ ತರಬೇತಿ ಕೊಡಿಸಲಾಗುತ್ತದೆ. ಅಕಾಡೆಮಿಯ ಸಿಬ್ಬಂಧಿಗಳು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಯಾವ ರೀತಿ ಓದಬೇಕು ಎಂಬುದನ್ನು ಚೆನ್ನಾಗಿ ತಿಳಿಸಿಕೊಡುತ್ತಾರೆ. ಇಂತಹ ಅಕಾಡೆಮಿಯಲ್ಲಿ ತರಬೇತಿ ಪಡೆಯಬೇಕು ಮತ್ತು ನಿರಂತರ ಅಭ್ಯಾಸ ಮಾಡಬೇಕು ಮತ್ತು ಗುರಿ ಸಾಧಿಸಬೇಕು ಎಂದು ಹಾರೈಸುತ್ತೇನೆ.

ಮಧು & ಮಮತ - ಸಾಗರ
ಪಿ.ಎಸ್.ಐ -೨೦೧೮ ನೇ ಬ್ಯಾಚ್

೨೦೧೯ ರಲ್ಲಿ ಅಧಿಸೂಚನೆ ಹೊರಡಿಸಿ, ೨೦೨೦ ರಲ್ಲಿ ಪರೀಕ್ಷೆ ಬರೆದು, ೨೦೨೧ ಜನವರಿ ೧೮ ರಿಂದ ಬೆಂಗಳೂರು ಸಿಟಿ ವಿಭಾಗದಲ್ಲಿ ಪ್ರೊಬೆಷನರಿ ಪಿ.ಎಸ್.ಐ. ಆಗಿ ವರದಿ ಮಾಡಿಕೊಂಡಿರುತ್ತೇನೆ. ಇದೆಲ್ಲಾ ಸಾಧ್ಯವಾಗಿದ್ದು ಆರ್.ಎಲ್.ಜಾಲಪ್ಪ ಅಕಾಡೆಮಿಯಿಂದ. ಇಲ್ಲಿ ೪ ತಿಂಗಳ ತರಬೇತಿ ಪಡೆದಿರುತ್ತೇನೆ. ಪಿ.ಎಸ್.ಐ/ ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆಗೆ ತರಬೇತಿ ಬೇಕಾಗಿರುವಂತಹವರು ನಮ್ಮ ಆರ್.ಎಲ್.ಜಾಲಪ್ಪ ಅಕಾಡೆಮಿ ಸಂಪರ್ಕಿಸಬಹುದು. ಅಲ್ಲಿ ಉಳಿಯಲು ಉತ್ತಮ ವಾತಾವರಣವಿದೆ. ಊಟ ವಸತಿ ಸೌಲಭ್ಯ ಕೂಡ ಇದೆ. ಕೋಚಿಂಗ್ ಕೂಡ ಇದೆ. ಕೋಚಿಂಗ್ ಸಹ ಉತ್ತಮವಾಗಿದೆ ಪಿ.ಎಸ್.ಐ. ಆಕಾಂಕ್ಷಿಗಳಿಗೆ ದೈಹಿಕ ಪರೀಕ್ಷೆಗೆ ಪ್ಲೇಗ್ರೌಂಡ್ ವ್ಯವಸ್ಥೆಯಿದೆ. ಉತ್ತಮ ಕೋಚಿಂಗ್‌ಗೆ ಆರ್.ಎಲ್.ಜಾಲಪ್ಪ ಅಕಾಡೆಮಿ ಸಂಪರ್ಕಿಸಿ. ಧನ್ಯವಾದಗಳು

ರಾಜೇಶ್ – ರಾಮನಗರ
ಪಿ.ಎಸ್.ಐ. ೨೦೧೯ ನೇ ಬ್ಯಾಚ್

ಆರ್.ಎಲ್.ಜಾಲಪ್ಪ ಅಕಾಡೆಮಿಯಲ್ಲಿ ೨೦೧೫ ರಲ್ಲಿ ಬ್ಯಾಂಕಿಂಗ್ ಕೋಚಿಂಗ್ ಪಡೆದಿರುತ್ತೇನೆ. ೨೦೧೬ ರಲ್ಲಿ ಮೈಸೂರು- ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‌ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಇದಕ್ಕೆ ಕಾರಣವಾದ ಆರ್.ಎಲ್.ಜಾಲಪ್ಪ ಅಕಾಡೆಮಿಗೆ ಋಣಿಯಾಗಿರುತ್ತೇನೆ.

ಗೌರಮ್ಮ, ಸಹಾಯಕ ವ್ಯವಸ್ಥಾಪಕರ
ಮೈ.ಚಾ.ಜಿ.ಸ.ಬ್ಯಾಂಕ್

Students Feedback

Firstly thank you so much for giving us this opportunity. It was really worth attending yesterday's both the sessions, both the panels has helped us in giving the directions to prepare for interview and topics to be focused. It has boosted our confidence level. Thanks to you & your team for your support Sir.
- Sunil Kumar (KAS aspirant)

Mock interviews were very good.... Thank you so much for all your effort in helping us.
- Dr. Sumanth (KAS aspirant)

I am thankful to you for giving us an opportunity to participate. It was really worth attending interview. It has helped us giving the right directions to prepare, analysed our level .. topics to be focused. It has boosted our confidence & motivated. Thanks to the team for valuable guidance Sir.
- Girimallappa Bagali (KAS aspirant)

Namaste.. it was great opportunity for us to refreshing our real personality. Definitely in coming days this could change our course of our lives. Interviews had cordial and well resource personal. We had excellent time sir. Thank you, we'll definitely make it out success.
- Naveen Kumar (KAS aspirant)

My opinion about the mock interview conducted on 27th and 28th of April 2019.
1. Mock interview enhanced our confidence.
2. Awareness about major state and national issues which are important for interview.
3. Got an Idea about our body language, communication skills, listening skills, dressing sense, etc.
4. Learnt about pressure handling during answering multiple tricky questions.
5. Learnt about Important facts and topics to be focused.
6. Valuable feedback helped us to assess ourselves for better preparation.
7. We got an opportunity to clarify our doubts about various subjects.
8.Understood our strengths and weakness to overcome.

I was like a frog in the well before attending an interview, now am feeling like an eagle in the sky. The credit goes to the whole team of organizers and panel members. Very grateful to all of you.
- Sushma S. (KAS aspirant)

Today's mock interview was very effective...and very help full to me thank u for giving this opportunity.. - Rajeshwari (KAS aspirant)

Thanks for given me a worthy opportunity. I had refreshed n updated. panel was as good as KPSC panel..I will apply it in real-time. Thanks sir regards.
- Naveen (KAS aspirant)